ಒಂದು ಏಡಿಗೆ ಹನ್ನೆರಡು ತಿಂಗಳುಗಳು ಅನ್ನುವುದು ಗ್ರೀಕರಿಂದ ಬಂದ ಬಳುವಳಿ. ಅದನ್ನು ಗ್ರೆಗೋರಿಯನ್ ಕ್ಯಾಲೆಂಡರ್ ಎಂಬುದಾಗಿ ಅವರು ಕರೆದರು. ಅವುಗಳನ್ನು ಬೇರೆ ಬೇರೆ ನಾಡಿನವರು ತಮ್ಮದೇ ನುಡಿಯಲ್ಲಿ ಮಾರ್ಪಡಿಸಿಕೊಂಡರು. ಆದರೆ ಕನ್ನಡಿಗರು ಮಾತ್ರ ತಮ್ಮದೇ ನುಡಿಯಲ್ಲಿ ಈ ತಿಂಗಳುಗಳ ಹೆಸರನ್ನು ಕಟ್ಟಿಕೊಳ್ಳದೆ, ತಮ್ಮದಲ್ಲದ ಆಂಗ್ಲ ನುಡಿಯವರು ಕಟ್ಟಿದ ಜನೆವರಿ, ಫೆಬ್ರವರಿಗಳನ್ನೇ ಎಲ್ಲೆಡೆ ಬಳಸುತ್ತಾ ಬಂದಿದ್ದಾರೆ. ಇನ್ನು ಕೆಲವರು ಕನ್ನಡದ್ದು ಎಂಬ ಹೆಸರಲ್ಲಿ ಚೈತ್ರ ವೈಶಾಖ ಎಂಬ ಸಂಸ್ಕೃತ ತಿಂಗಳುಗಳ ಹೆಸರನ್ನು ಬರೆಯುತ್ತಾರೆ. ಹೀಗಾಗಿ ಕನ್ನಡಿಗರಿಗೆ ತಮ್ಮದೇ ಆದ ತಿಂಗಳುಗಳನ್ನು ಡಿ. ಎನ್. ಶಂಕರ ಭಟ್ಟ ಅವರು ಕಟ್ಟಿ ಕೊಟ್ಟಿದ್ದಾರೆ. ಅವುಗಳು ಈ ಕೆಳಗಿನಂತಿವೆ.